ಅರ್ಪಣೆ
ತಂದೆ - ತಾಯಿಗೆ
Special Thanks To
ತಂದೆ - ತಾಯಿಗೆ
Special Thanks To
ಈ ಕಥೆಯಲ್ಲಿ ಒಂದಷ್ಟು ವೈದ್ಯಕೀಯ ಭಾಷೆಯನ್ನು( ಚಿಕಿತ್ಸೆ ಹಾಗೂ ಚಿಕಿತ್ಸೆಯ ರೀತಿಯನ್ನು ವಿವರಿಸಲು) ಬಳಸಲಾಗಿದೆ. ಇದಕ್ಕೆ ಸಹಕರಿಸಿದ
Dr. Prashanth kulkarni
&
Dr. Sanjana Fadnavis. ಇವರಿಗೆ ಧನ್ಯವಾದಗಳು.
image creation
Mr. Sachin Taggarse.
image credit : google.com
"Congratulations madam!
ನಂದಿನಿಯ ಕೆನ್ನೆಯ ಮೇಲಿನ ಬೆವರ ಹನಿಯನ್ನು ಒರೆಸುತ್ತಾ ನರ್ಸ್ ಹೇಳಿದಳು, "ಗಂಡು ಮಗುವಾಗಿದೆ!"
"ಮಗು ಆರೋಗ್ಯವಾಗಿದೆಯಲ್ಲ?" ಆತಂಕದ ಈ ಪ್ರಶ್ನೆಯಲ್ಲಿ ನಂದಿನಿಯ ಸ್ವರ ತರಂಗಗಳು ಕಂಪಿಸುತ್ತಿದ್ದವು.
"ಹಾ..", ಮುಖದಲ್ಲಿನ ಪ್ರಶ್ನಾರ್ಥಕ ಚಿಹ್ನೆಯನ್ನು ಮರೆ ಮಾಚುತ್ತಾ ನರ್ಸ್ ಉತ್ತರಿಸಿದಳು.
" ಮತ್ತೇಕೆ ಮಗು ಅಳುತ್ತಿಲ್ಲ ?" ನಂದಿನಿಯ ಮರು ಪ್ರಶ್ನೆಯ ಸಾಲು ಮುಗಿಯುತ್ತಿದ್ದಂತೆ ಮಗು ಅಳುವ ಧ್ವನಿ ಕೇಳಿ ಆಕೆ ಸಮಾಧಾನದ ನಿಟ್ಟುಸಿರು ಬಿಟ್ಟಳು.

ಕೆಲ ನಿಮಿಷದ ನಂತರ Doctor, ಬಿಳಿ ಬಟ್ಟೆಯಲ್ಲಿ ಸುತ್ತಿದ ನಂದಿನಿಯ 'bundle of joy' ಯನ್ನು ಆಕೆಯ ಮಡಿಲಿಗೆ ನೀಡುತ್ತಾ , ಚಿಂತಿಸುವ ಅಗತ್ಯವೆ ಇಲ್ಲ mam!
ಇಂದು ಬಹಳ ವರ್ಷಗಳ ನಂತರ ಇಷ್ಟೊಂದು perfect labour process ನೋಡಿ, ಕಾಲೇಜ್‌ನಲ್ಲಿದ್ದಾಗ theory ಯಲ್ಲಿ ಓದಿದ್ದು ನೆನಪಾಯಿತು!! It was a picture book delivery . So just relax and enjoy. " ಡಾಕ್ಟರ್ ರ ಈ ಮಾತುಗಳನ್ನು ಕೇಳಿ ನಂದಿನಿಯ ಆನಂದಕ್ಕೆ ಪಾರವೇ ಇರಲಿಲ್ಲ..! ಆಕೆ ತನ್ನ ಹಸುಗೂಸಿನ ಕಿರಿದಾದ ಗುಲಾಬಿ ಕೈಯನ್ನು ತನ್ನ ಕೈಯಲ್ಲಿಟ್ಟು ಮೆಲ್ಲಗೆ ಮ್ರದುವಾಗಿ ಅದುಮಿ ತನ್ನ ಜೀವನಕ್ಕೆ ಸ್ವಾಗತಿಸಿಕೊಳ್ಳುತ್ತಿದ್ದಂತೆ, ಆಕೆಯ ಸಣ್ಣ ಪಾರ್ಟನರ್ ಸಹ ಕೂಡಲೇ ಆಕೆಯ ಬೆರಳನ್ನು ತನ್ನ ಮುಷ್ಠಿಯಲ್ಲಿ ಗಟ್ಟಿಯಾಗಿ ಹಿಡಿದುಬಿಟ್ಟ. ಕಳೆದ ಒಂಬತ್ತು ತಿಂಗಳ ಅವರ ಸಂಬಂಧ ಈಗ ಇನ್ನಷ್ಟು ಗಟ್ಟಿಯಲ್ಲಿ ಬಂಧಿಯಾಗಿದೆ.

ನಂದಿನಿ ಮತ್ತು ಆಕೆಯ ಮಗುವನ್ನು ನರ್ಸ್ ಲೇಬರ್ ರೂಂ ನಿಂದ ಅವರ ಕೋಣೆಗೆ ಕರೆದುಕೊಂಡು ಹೋಗುತ್ತಿರುವಾಗ, ಪಕ್ಕದ ಒಂದು ಕೋಣೆಯಿಂದ ಯಾರೋ ಜೋರಾಗಿ ರೋಧಿಸುತ್ತಿರುವ ಶಬ್ದ ನಂದಿನಿಗೆ ಕೇಳಿಸಿತು. ಈ ಬಗ್ಗೆ ನರ್ಸಗೆ ಕೇಳಿದಾಗ ಆಕೆ, " ಮುಂಜಾನೆ ಆಕೆಯ ಮಗು ಸತ್ತು ಹೋಯಿತು. ತುಂಬಾ ದಿನದಿಂದ ಹುಷಾರಿರಲಿಲ್ಲ" ಎಂದಳು.
ಇದನ್ನು ಕೇಳುತ್ತಲೆ ನಂದಿನಿಗೆ ಎದೆ ಒಡೆದಂತಾಗಿತ್ತು. ಆಕೆ ತನ್ನ ಕೈಯಲ್ಲಿರುವ ಹಸುಗೂಸನ್ನು ಇನ್ನೂ ಜೋರಾಗಿ ಹಿಡಿದುಕೊಂಡು ಇನ್ನೊಂದು ಕೈಯಿಂದ ಮಗುವಿಗೆ ದ್ರಷ್ಠಿ ತೆಗೆದಳು.
ನಂತರ ಕೋಣೆಗೆ ಹೋಗಿ ಸ್ವಲ್ಪ ಸುಧಾರಿಸಿಕೊಳ್ಳುವುದರಲ್ಲಿ, ನಂದಿನಿಯ ಗಂಡ ಹಾಗೂ ಮಗಳು ಇಬ್ಬರೂ ಅಲ್ಲಿಗೆ ಬಂದರು. ನಿನ್ನೆಯವರೆಗೂ ನಾಲ್ಕು ವರ್ಷದ ಮಗಳು ನಂದಿನಿಗೆ ಮಗುವಾಗಿ ಕಾಣುತ್ತಿದವಳು ಇಂದು ಅಚಾನಕ್ ಆಗಿ ದೊಡ್ಡವಳಂತೆ ಕಂಡಳು... ಇಂದು ಆಕೆ ಅಕ್ಕನ ಪದವಿ ಪಡೆದಿದ್ದಳು.
ಮಗುವನ್ನು ಕಂಡು ಇಬ್ಬರಿಗೂ ತುಂಬಾ ಖುಷಿಯಾಯಿತು.
ಗಂಡ ಮತ್ತು ಮಗಳು ಮಗವೊಂದಿಗೆ ಆಡುವುದು, ನಗುವುದು ನೋಡಿ ನಂದಿನಿ ನಿರ್ಲಿಪ್ತಳಾದಳು. ಆಕೆಗೆ ಕುಟುಂಬದ ಪರಿಪೂರ್ಣತೆಯ ಭಾಸವಾಗುತ್ತಿತ್ತು.

ನಂತರದ ಎರಡು ದಿನಗಳು ಹೇಗೆ ಕಳೆದವೂ ಗೊತ್ತೆ ಆಗಲಿಲ್ಲ. ಮಗುವಿನ ಹಸು, ನಿದ್ರೆ, ಕಾಳಜಿ ಜೊತೆಗೆ ನೋಡಲು ಬರುವವರ ದಂಡು. ಆದರೆ luckily ಮಗು ಒಂಚೂರು ಅಳದೆ ಶಾಂತವಾಗಿತ್ತು.
ರಾತ್ರಿಯೂ ಸಹ ಕೇವಲ ಹಸಿವಾದಾಗ ಮಾತ್ರ ಎದ್ದು, ಹೊಟ್ಟೆ ತುಂಬಿದ ತಕ್ಷಣ ಮತ್ತೆ ಶಾಂತವಾಗಿ ನಿದ್ರೆಗೆ ಜಾರುತ್ತಿತ್ತು. ಹಾಗಾಗಿ ನಂದಿನಿಗೂ ಸಹ ಚೆನ್ನಾಗಿಯೆ ವಿಶ್ರಾಂತಿ ಸಿಗುತ್ತಿತ್ತು.
ಮೂರನೆ ದಿನದ ರಾತ್ರಿ ನಂದಿನಿಯ ಮಗಳು ಆಸ್ಪತ್ರೆಯಿಂದ ಮನೆಗೆ ಹೋಗುವಾಗ ಆಕೆಗೆ ಮರುದಿನ ತನ್ನ ತಾಯಿ ಹಾಗೂ ತಮ್ಮ, ಮನೆಗೆ ಬರುವುದನ್ನು ತಿಳಿದು ತುಂಬಾ ಖುಷಿಯಾಗಿದ್ದಳು. ನಂದಿನಿಗೂ ಸಹ ತಾನು ಯಾವಾಗ ಮಗುವನ್ನು ಮನೆಗೆ ಕರೆದುಕೊಂಡು ಹೋಗುತ್ತಿನೊ ಅನ್ನಿಸುತ್ತಿತ್ತು.
ಗಂಡ ಮತ್ತು ಮಗಳು ಮನೆಗೆ ಹೋದ ನಂತರ ನಂದಿನಿ ಮಲಗಲು ಸಿದ್ಧತೆ ಮಾಡಿಕೊಳ್ಳುತ್ತಾ , ಪಕ್ಕದಲ್ಲೆ ಶಾಂತವಾಗಿ ಮಲಗಿದ್ದ ಮಗುವಿನ ಸ್ವಚ್ಚ, ಮುಗ್ಧ ಮುಖವನ್ನು ನೋಡಿ ಆಕೆಗೆ ಧನ್ಯತೆಯ ಭಾವ ಉಕ್ಕಿ ಬಂದಿತ್ತು.

ಕಳೆದ ಎರಡು ಮೂರು ದಿನಗಳಿಂದ ಮಗುವನ್ನು ನೋಡಲು ಬಂದವರೆಲ್ಲ ಹೇಳಿದ್ದು ಒಂದೇ ಮಾತು. ಮಗು "ರಾಜಕುಮಾರ" ನಂತಿದೆ. ನಂದಿನಿಯ ಗೆಳತಿಯೂ ಸಹ , ಈ ಮಗುವಿನ ಮುಖದಲ್ಲಿ ಒಂಥರ ಅಸಾಮಾನ್ಯವಾದ ಶಾಂತತೆಯ ಭಾವ ಇದೆ. ಪ್ರತಿ ಮಗುವಿನಲ್ಲೂ ಕಾಣಲಾಗದ ಕಾಂತಿ ಇದೆ ಎಂದು ಹೇಳಿದ್ದಳು.
ಕೆಲವರು ಮಗುವಿನ ಗುಳಿಕೆನ್ನೆಯನ್ನು ಕಂಡು ಫಿಧಾ ಆಗಿದ್ದರು. ನಂದಿನಿಯ ಮಗಳ ಗೆಳತಿಯೊಬ್ಬಳು ತನ್ನ ತಾಯಿಯಲ್ಲಿ " ಅಮ್ಮ ನನಗೂ ಇಂತಹದೆ ತಮ್ಮ ಬೇಕು ನೀನು ಆಂಟಿಗೆ ಹೇಳು ನಮಗೂ ಇಂತಹದೆ ಒಬ್ಬ ತಮ್ಮನನ್ನು ತಂದುಕೊಡಲು." ಎಂದು ಹೇಳಿದ್ದನ್ನೆಲ್ಲ ನೆನಪಿಸಿಕೊಳ್ಳುತ್ತಾ ಮನದೊಳಗೆ ಸಂತೋಷವನ್ನು
ಅನುಭವಿಸುತ್ತ, ಮಗುವಿನ ಮುಷ್ಠಿಯಲ್ಲಿ ತನ್ನ ಕೈ ಬೆರಳನ್ನು ಇಟ್ಟು ನಿದ್ರೆಗೆ ಜಾರಿದಳು. ಕಳೆದ ಮೂರು ದಿನಗಳಲ್ಲಿ ಈ ಮುಷ್ಠಿಯ ಬಂಧನ ಎಷ್ಟು ಗಟ್ಟಿಯಾಗಿತ್ತೆಂದರೆ ಅದು ಜನ್ಮ ಜನ್ಮಾಂತರದ ಬಂಧನ ಎನ್ನುವಂತೆ ಭಾಸವಾಗತೊಡಗಿತ್ತು ನಂದಿನಿಗೆ. ಇದಕ್ಕಾಗಿ ಆಕೆ ದೇವರಿಗೆ ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತಾ ಕಣ್ಣು ಮುಚ್ಚಿದಳು.

ರಾತ್ರಿಯ ಸಮಯವಾಗಿದ್ದರಿಂದ ಎಲ್ಲವೂ ಶಾಂತವಾಗಿತ್ತು . ಆದರೆ, ಸ್ವಲ್ಪ ಸಮಯದಲ್ಲೆ ನಂದಿನಿಗೆ ತನ್ನ ಮಗುವಿನ ಮುಷ್ಟಿ ನಿಧಾನವಾಗಿ ಸಡಿಲವಾಗುತ್ತಿರುವಂತೆ ಭಾಸವಾಯಿತು. ಆಕೆ ಗಾಬರಿಯಿಂದ ಎದ್ದು ನೋಡಿದಳು. ಮಗು ಶಾಂತವಾಗಿಯೇ ಮಲಗಿತ್ತು. "ಸುಮ್ನೆ ಟೆನ್ಷನ್ ಮಾಡ್ಕೊತೀಯ ನೀನು" ಎಂದು ತನ್ನಲ್ಲೆ ತಾನು ಹೇಳಿಕೊಳ್ಳುತ್ತಾ ಪುನಃ ಹಾಸಿಗೆಗೆ ಒರಗಿದಳು.
ಕೆಲ ನಿಮಿಷಗಳ ನಂತರ ಆಕೆಗೆ ಏನೊ ಶಬ್ದ ಕೇಳಿಸತೊಡಗಿತ್ತು. ಕೂಡಲೆ ಮಂಚದ ಪಕ್ಕದಲ್ಲಿರುವ ದೀಪದ ಸ್ವಿಚ್ ಆನ್ ಮಾಡಿದಳು. ಶಬ್ದ ಆಕೆಯ ಪಕ್ಕದಿಂದಲೆ ಬರುತ್ತಿತ್ತು. ಆಕೆಯ ಮಗುವಿನ ಗಂಟಲಿನಿಂದಲೆ ಎಂದೆಸತೊಡಗಿತು.
ನಂದಿನಿ ಸೂಕ್ಷ್ಮವಾಗಿ ಗಮನಿಸಿದಳು. ಹೌದು, ಮಗುವಿನ ಪ್ರತಿ ಉಸಿರಿನೊಂದಿಗೆ ಆತನ ಗಂಟಲಿನಿಂದ 'ಘರ್-ಘರ್' ಎನ್ನುವ ಶಬ್ದ ಬರುತ್ತಿತ್ತು. Cold ಆಗಿದ್ಯಾ ಏನೋ ನನ್ನ ಕಂದನಿಗೆ ಎನ್ನುತ್ತಾ, ನಂದಿನಿ Bell ಬಾರಿಸಿ ನೈಟ್ ಡ್ಯೂಟಿ ನರ್ಸ್ ನ್ನು ಕರೆದಳು.
ರಾತ್ರಿಯ ಹನ್ನೊಂದು, ಹನ್ನೊಂದು ಹದಿನೈದರ ಸಮಯ. ವೈದ್ಯರ ಕೊನೆಯ ರೌಂಡ್ ಮಗಿದಿತ್ತು .ಹಾಗಾಗಿ ಹೊರಗಡೆ ಕಾರಿಡಾರ್ ನಲ್ಲಿ ತನ್ನ ಸಹೋದ್ಯೋಗಿಗಳ ಜತೆ ಹರಟೆ ಹೊಡೆಯುತ್ತಿದ್ಧ ನರ್ಸ್ Bell ಸೌಂಡ್ ಕೇಳಿದ ತಕ್ಷಣ ಓಡೋಡಿ ಬಂದಳು.
ನಂದಿನಿ, ಆ ಶಬ್ದದ ಬಗ್ಗೆ ಆಕೆಗೆ ಹೇಳಿದಳು. ನರ್ಸ್ ಮಗುವನ್ನು ಪರೀಕ್ಷಿಸಿದಳು. ಈಗ ಆ 'ಘರ್ ಘರ್' ಶಬ್ದ ಇನ್ನೂ ಹೆಚ್ಚಾಗಿತ್ತು. ಒಂದೇ ಒಂದು ಕ್ಷಣವೂ ವ್ಯರ್ಥ ಮಾಡದೆ ನರ್ಸ್ ಹೊರಗೆ ಓಡಿ ಮನೆಗೆ ಹೋಗಲು ಸಿದ್ಧವಾಗಿದ್ದ ಡಾಕ್ಟರನ್ನು ಕರೆದಳು. ಇಬ್ಬರೂ almost ಓಡೋಡಿ ಕೋಣೆಗೆ ಬಂದರು.

Doctor ಮಗುವಿನ ಮ್ರದುವಾದ ಕೈಯನ್ನು ಹಿಡಿದು
pulse ಚೆಕ್ ಮಾಡಿದರು. ಅಷ್ಟರಲ್ಲೇ ನರ್ಸ್ Duty room ಇಂದ Stethoscope ತಂದಳು. ನಂದಿನಿಯ ಕೈಯಿಂದ ಮಗುವನ್ನು ಕಸಿದುಕೊಳ್ಳುತ್ತಾ Doctor ಮಗುವಿನ ಹ್ರದಯ ಬಡಿತವನ್ನು ಅರಿಯಲು ಪ್ರಯತ್ನಿಸುತ್ತಿದ್ದರು. ಕ್ಷಣ ಕ್ಷಣಕ್ಕೂ Doctor ರ ಮುಖದಲ್ಲಿನ ಆತಂಕ ಹೆಚ್ಚಾಗತೊಡಗಿತ್ತು. ಪುನಃ ಪುನಃ stethoscope ನ ಜಾಗ ಬದಲಾಯಿಸುತ್ತಾ, ಕಣ್ಣು ಮುಚ್ಚಿ, ಹ್ರದಯ ಬಡಿತ ಆಲಿಸುವ ಪ್ರಯತ್ನ ಮಾಡುತ್ತಿದ್ದರು.

ಇದನ್ನೆಲ್ಲ ನೋಡುತ್ತಿದ್ದಂತೆ ನಂದಿನಿಯ ಎದೆಬಡಿತ ಗತಿ ತಪ್ಪ ತೊಡಗಿತ್ತು. ಈ ಎಲ್ಲಾ ಬೆಳವಣಿಗೆಗಳು ಅಕ್ಷರಶಃ ಕೆಲ ಸೆಕೆಂಡುಗಳಲ್ಲೆ ಘಟಿಸಿದ್ದನ್ನು ನೋಡಿ ನಂದಿನಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗತೊಡಗಿತ್ತು.
ಕೆಲ ಸಮಯದ ಮುಂಚೆ ತನ್ನ ಬದುಕಿಗೆ ಆನಂದದ ಕ್ಷಣಗಳನ್ನು ಕರುಣಿಸಿದ ದೇವರಿಗೆ ಧನ್ಯವಾದ ಹೇಳಿದ್ದ
ನಂದಿನಿ, ಈಗ ಇಂತಹ ಸಂದಿಗ್ಧ ಪರಿಸ್ಥಿತಿಗೆ ದೇವರಲ್ಲಿ ಪ್ರಾರ್ಥನೆಯಿಡಲು ಶುರುಮಾಡಿದಳು.
is everything fine ? ನಂದಿನಿ ಕಂಪಿಸುವ ಧ್ವನಿಯಲ್ಲಿ Doctor ರನ್ನು ಕೇಳಿದಳು.
Doctor : Sorry mam! situation ತುಂಬಾ ಗಂಭೀರವಾಗಿದೆ. ನಾನೀಗ ಮಗುವನ್ನು NICU ಗೆ ತೆಗೆದುಕೊಂಡು ಹೋಗುತ್ತೇನೆ.
ಮಗು ಸರಿಯಾಗಿ ಉಸಿರಾಡುತ್ತಿಲ್ಲ. ಹಾಗಾಗಿ ಮಗುವಿನ condition serious ಆಗಿದೆ.
ಹೀಗೆ ಹೇಳುತ್ತಲೆ Doctor, ಮಗುವಿನ ಕೈಯನ್ನು ಸ್ವಲ್ಪ ಮೇಲಕ್ಕೆ ಎತ್ತಿ ನಿಧಾನವಾಗಿ ಕೆಳಗೆ ಬಿಟ್ಟಾಗ ಅದು ನಿಷ್ಪ್ರಾಣದಂತೆ ಕೆಳಗೆ Bed ಮೇಲೆ ಬಿತ್ತು.
ಇದನ್ನೆಲ್ಲ ಕೇಳಿ- ನೋಡಿ ನಂದಿನಿಗೆ ಎದೆಬಿರಿದಂತಾಗಿತ್ತು. Doctor ಹೇಳಿದ್ದೆಲ್ಲವನ್ನು ಅರ್ಥಮಾಡಿಕೊಳ್ಳಲಾಗದಷ್ಟು ದಡ್ಡಿಯಾಗಿರಲಿಲ್ಲ ಆಕೆ.
ಕೂಡಲೇ doctor ನರ್ಸ ಕಡೆ ತಿರುಗಿ , Paediatrician ಗೆ ಫೋನ್ ಮಾಡಿ ಬರಲು ಹೇಳಿ.... "It's an emergency." ಎಂದು ಹೇಳುತ್ತಲೆ doctor ಮಗುವನ್ನು ಎತ್ತಿಕೊಂಡು Roomನಿಂದ ಹೊರಗಡೆ ನಡೆದರು.
ನಂದಿನಿಯ ಬೆರಳನ್ನು ಮುಷ್ಟಿಯಿಂದ ಬಿಡಿಸಿಕೊಂಡು ಆಕೆಯ ಮಗು ಆಕೆಯಿಂದ ದೂರ ನಡೆಯುತ್ತಿದ್ದದ್ದನ್ನು ನೋಡಿ, ನಿರ್ಲಿಪ್ತತೆಯಿಂದ ಗರಬಡಿದವಳಂತೆ ಕುಳಿತಿದ್ದ ನಂದಿನಿಗೆ ಇದ್ದಕಿದ್ದಂತೆ ಯಾರೂ ಬಂದು ಎಚ್ಚರಿಸಿದಂತಾಗಿ ಕೂಡಲೇ ಆಕೆ ಮಗುವಿನ ಹಿಂದೆಯೆ ಓಡಿ NICU ತಲುಪಿದಳು.

ನಂದಿನಿ ICU ತಲುಪುವಷ್ಟರಲ್ಲಿ doctorಮಗುವಿಗೆ treatment ಶುರುಮಾಡಿದ್ದರು. ಒಂದು ಕಡೆ ಮಗುವಿಗೆ ಬೇರೆ ಬೇರೆ ಇಂಜೆಕ್ಷನ್ ಕೊಡುತ್ತಾ ಅವರು ನಂದಿನಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಕೊನೆಯದಾಗಿ ಯಾವಾಗ ಹಾಲು ಕುಡಿಸಿದ್ರಿ? ಮಗು ಅಳುತ್ತಿತ್ತಾ? ನಿಮ್ಗೆ ಯವಾಗಿನಿಂದ ಈ ಘರ್ - ರ್ಘರ್ ಎನ್ನುವ ಶಬ್ದ ಕೇಳಿಸುತ್ತಿತ್ತು? ಇತ್ಯಾದಿ ಇತ್ಯಾದಿ . ನಂದಿನಿ ಆಕೆಗೆ ನೆನಪಿಗೆ ಬಂದಂತೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದಳು. ಸಣ್ಣ ಸಣ್ಣ ಸಂಗತಿಗಳನ್ನೂ Doctorರ ಗಮನಕ್ಕೆ ತಂದಳು. ಆಕೆಯ ಕಣ್ಣುಗಳು ಮಾತ್ರ ಮಗುವಿನ ಮೇಲೆ ಸ್ಥಿರವಾಗಿದ್ದವು.
ಮನಸ್ಸಿನಲ್ಲಿ ಸತತವಾಗಿ ದೇವರ ಪ್ರಾರ್ಥನೆಯನ್ನು ಮುಂದುವರಿಸಿದಳು.

ಆ ಕ್ಷಣ ಇದಕ್ಕಿಂತ ಹೆಚ್ಚಾಗಿ ಆಕೆಯ ಕೈಯಲ್ಲಿ ಇನ್ನೇನು ಇರಲಿಲ್ಲ. ಆ ಸಣ್ಣ ಜೀವವನ್ನು ಉಳಿಸುವ ಸಲುವಾಗಿ ICU ನ ಎಲ್ಲಾ ಸಿಬ್ಬಂದಿಗಳು ಪ್ರಯತ್ನಿಸುತ್ತಿದ್ದರು.
ಕೆಲ ನಿಮಿಷದಲ್ಲೆ Paediatrician ಕೂಡ ಬಂದು ತಲುಪಿದರು. ಕೂಡಲೆ Duty Doctor, Paediatrician ಗೆ ಎಲ್ಲಾ ಪರಿಸ್ಥಿತಿಯನ್ನು ವಿವರಿಸಿದರು. ಮಗುವಿನ ತಪಾಸಣೆ ಮಾಡುತ್ತಲೆ ಅವರು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದರು. ನರ್ಸ್ ಮಗುವಿಗೆ Glucose ಹಾಕಲು ಪ್ರಯತ್ನಿಸುತ್ತಿದ್ದಳು .ಆದರೆ ಆಕೆಗೆ vein ಸಿಗುತ್ತಿರಲಿಲ್ಲ. ಆ ಪುಟ್ಟ ಶರೀರದ ಕೈ ಕಾಲುಗಳಿಗೆಲ್ಲ ಸೂಜಿ ಚುಚ್ಚುತ್ತಿದ್ದರು. ಮಗು, ಈ ಎಲ್ಲಾ ಸಂವೇದನೆಯ ಆಚೆ ಹೋಗಿದ್ದರಿಂದ ಅದಕ್ಕೆ ನೋವಿನ ಅನುಭವ ಆಗುತ್ತಿರಲಿಲ್ಲ. ಆದರೆ ಹೊರಗಡೆ ನಿಂತು ಇದನ್ನೆಲ್ಲ ICU ನ ಬಾಗಿಲಿನ ಸಣ್ಣ ಗಾಜಿನಿಂದ ನೋಡುತ್ತಿದ್ದ ನಂದಿನಿಯ ಮನಸ್ಸಿಗೆ ಅತ್ಯಂತ ಆಘಾತ ನೀಡಿತ್ತು.

ಸತತ ಪ್ರಯತ್ನದ ನಂತರ ಕೊನೆಗೂ ಮಗುವಿಗೆ Glucose ನೀಡುವಲ್ಲಿ Doctor ಯಶಸ್ವಿಯಾದಾಗ ಎಲ್ಲರೂ ಒಮ್ಮೆ ನಿಟ್ಟುಸಿರು ಬಿಟ್ಟರು. ಆದರೆ ಇಂದೊಂದು ಹಂತವಾಗಿತ್ತು ಅಷ್ಟೆ. Emergency ಇನ್ನೂ ಹಾಗೆ ಮುಂದುವರಿದಿತ್ತು.
Doctor ನಂದಿನಿಯ ಕಡೆಗೆ ಹೋಗಿ, " ನಿಮ್ಮ ಮಗುವಿನ ಶ್ವಾಸಕೋಶದಲ್ಲಿ ಸಮಸ್ಯೆ ಇದೆ. ಹಾಗಾಗಿ ಮಗು ಉಸಿರಾಡಲು ಕಷ್ಟಪಡುತ್ತಿದೆ. ಇದರಿಂದ ಮಗುವಿನ ಶರೀರದಲ್ಲಿ ಆಕ್ಸಿಜನ್ ಕಡಿಮೆ ಆಗ್ತಿದೆ. ನಾವು ಶ್ವಾಸಕೋಶದ ಚಿಕಿತ್ಸೆ ನೀಡುತ್ತೇವೆ. ಜೊತೆಗೆ Emergency treatment ಕೂಡ ಶುರು ಮಾಡಿದ್ದೇವೆ." ಆದರೆ ಇನ್ನೂ ಅಪಾಯ ಸರಿದಿಲ್ಲ. ನಾವು ನಮ್ಮ ಪ್ರಯತ್ನ ಮುಂದುವರಿಸುತ್ತೇವೆ. ಹೀಗೆ ಹೇಳುತ್ತಲೆ "ಒಂದು ಕ್ಷಣ ತಡೆದು ನಂದಿನಿಯ ಕೈ ಹಿಡಿದು ನೀವೂ ದೇವರಲ್ಲಿ ಪ್ರಾರ್ಥಿಸಿಕೊಳ್ಳಿ" ಎಂದು ಹೇಳಿ ಪುನಃ ICU ನ ಒಳಗೆ ನಡೆದರು.

ಇದನ್ನೆಲ್ಲ ಕೇಳಿ ನಂದಿನಿ ಸ್ತಬ್ಧಳಾದಳು. ಆಕೆಯ ಮಗುವಿನ ಕಡೆಗೆ ನೋಡುತ್ತಾ ಒಂದು ಮೂಲೆಗೆ ಹೋಗಿ ನಿಂತುಬಿಟ್ಟಳು. ಹೀಗೆ ಸ್ವಲ್ಪ ಸಮಯದ ನಂತರ ಆಕೆಗೆ ತನ್ನ ಪತಿಯ ನೆನಪಾಗಿ ಗಡಿಯಾರದ ಕಡೆ ನೋಡಿದಳು
ಅದು ಮಧ್ಯರಾತ್ರಿಯ 12:40 ತೋರಿಸುತ್ತಿತ್ತು. ನಂದಿನಿ ತನ್ನ ಮನೆಯ ನಂಬರನ್ನು ನರ್ಸಗೆ ಕೊಟ್ಟು duty room ನ ಫೋನ್ ನಿಂದ ತನ್ನ ಮನೆಗೆ ಕರೆ ಮಾಡಿ ವಿಷಯ ತಿಳಿಸುವಂತೆ ವಿನಂತಿ ಮಾಡಿಕೊಂಡಳು. ಏಕೆಂದರೆ ಈ ಹೊತ್ತು ಆಕೆಯ ಮಗುವನ್ನು ಒಂಟಿಯಾಗಿ ಬಿಟ್ಟು ಹೋಗುವ ಕಲ್ಪನೆಯನ್ನೂ ಸಹ ಆಕೆ ಮಾಡುವಂತಿರಲಿಲ್ಲ.

ಸಾಧಾರಣ ಅರ್ಧ- ಮುಕ್ಕಾಲು ಗಂಟೆಯ ನಂತರ ನಂದಿನಿಯ ಪತಿ ಆಸ್ಪತ್ರೆ ತಲುಪಿದರು. ಆತ ICU ನ ಬಾಗಿಲ ಬಳಿ ನಿಂತ ನಂದಿನಿಯನ್ನು ನೋಡಿ ಅಕ್ಷರಶಃ ಧಿಗ್ಬ್ರಾಂತನಾಗಿದ್ದ. ಆಕೆಯ ದುಃಖತ್ರಪ್ತ ಮುಖ ನೋಡಿ ಕ್ಷಣಾರ್ಧದಲ್ಲಿ ಆತನ ಆತಂಕ ಇಮ್ಮಡಿಯಾಯಿತು. ಆತ ಭಯದಿಂದಲೆ ನಂದಿನಿಯನ್ನು ವಿಚಾರಿಸಿದ. " ಮಗು ಎಲ್ಲಿ? ಏನಾಯ್ತ ಮಗುವಿಗೆ?"
ನಂದಿನಿ Doctor ಕಡೆ ಬೆರಳು ತೋರಿಸುತ್ತಾ " ಮಗುವಿನ ಶ್ವಾಸಕೋಶದಲ್ಲಿ ಸಮಸ್ಯೆ ಇದೆ. ಹಾಗಾಗಿ ಆಕ್ಸಿಜನ್ ಲೆವೆಲ್ ತುಂಬಾ ಕಡಿಮೆ ಆಗಿದೆಯಂತೆ,
ಕೇಸ್ ತುಂಬಾ ಸೀರಿಯಸ್ ಅಂತ ಡಾಕ್ಟರ್ ಹೇಳ್ತಿದ್ರು."
ಈ ಮಾತನ್ನು ಕೇಳುತ್ತಿದ್ದಂತೆ ನಂದಿನಿಯ ಪತಿ ಧೈರ್ಯ ಕಳೆದುಕೊಂಡ. ಇಬ್ಬರೂ ಒಬ್ಬರಿಗೊಬ್ಬರು ಧೈರ್ಯ ತುಂಬುತ್ತಿದ್ದರು. ನಂದಿನಿಗೆ ಒಮ್ಮೆಲೆ ಆಕೆಯ ಮಗಳಿನ ನೆನಪಾಗಿ ಗಂಡನಲ್ಲಿ ವಿಚಾರಿಸಿದಳು. " ಕಾರಿನ ಹಿಂದಿನ ಸೀಟಿನಲ್ಲಿ ಮಲಗಿದ್ದಾಳೆ" ರಾತ್ರಿಯ ಸಮಯವಾಗಿದ್ದರಿಂದ ಕಾರನ್ನು ಒಳಗಡೆಯ ತನಕ ತರಲಾಗಲಿಲ್ಲ ಎಂದು ಆಕೆಯ ಗಂಡ ಉತ್ತರಿಸಿದ.
ಆತನನ್ನು ಅಲ್ಲಿಯೆ ಮಗುವಿನ ಬಳಿ ನಿಲ್ಲಲು ಹೇಳಿ
ನಂದಿನಿ ಪಟ ಪಟನೆ ಕಾರಿನ ಬಳಿಗೆ ನಡೆದಳು. ಕಾರಿನಲ್ಲಿ ಮಲಗಿದ್ದ ಮಗಳನ್ನು ನಿಧಾನವಾಗಿ ಎಚ್ಚರಿಸಿದಳು. ಎದುರುಗಡೆ ತಾಯಿಯನ್ನು ನೋಡಿ ಆಕೆಯ ಮಗಳಿಗೆ ತುಂಬಾ ಖುಷಿಯಾಯಿತು. ಕೂಡಲೆ ಆಕೆ " ಅಮ್ಮ ನನ್ನ ತಮ್ಮನಿಗೆ ಏನಾಯ್ತು"? ಎಂದು ನಂದಿನಿಯನ್ನು ಕೇಳಿದಳು.
ಎದುರುಗಡೆ ತಾಯಿಯನ್ನು ನೋಡಿ ಆಕೆಯ ಮಗಳಿಗೆ ತುಂಬಾ ಖುಷಿಯಾಯಿತು. ಕೂಡಲೆ ಆಕೆ " ಅಮ್ಮ ನನ್ನ ತಮ್ಮನಿಗೆ ಏನಾಯ್ತು"? ಎಂದು ನಂದಿನಿಯನ್ನು ಕೇಳಿದಳು.
ತನ್ನ ಎಲ್ಲಾ ಆತಂಕವನ್ನು ಮರೆಮಾಚುತ್ತಾ, ಸ್ವಲ್ಪ ಧೈರ್ಯ ತಂದುಕೊಂಡು , "ನೋಡು ಸಧ್ಯ ಚಳಿ ಜಾಸ್ತಿ ಇದೆಯಲ್ಲ ಹಾಗಾಗಿ ಮಗುವಿಗೆ cold ಆಗಿದೆ ಅಷ್ಟೆ." ಈಗ ಮಗು ಬೇಗ ಹುಶಾರಾಗಲಿ ಎಂದು ನಾವೆಲ್ಲ ಸೇರಿ ದೇವರಲ್ಲಿ ಬೇಡಿಕೊಳ್ಳೊಣ ಆಯ್ತ. ಎಂಬ ನಂದಿನಿಯ ಉತ್ತರಕ್ಕೆ " ಹಾ, ಸರಿ." ಎನ್ನುತ್ತಾ ವಾಸ್ತವದ ಅರಿವಿಲ್ಲದ ಆ ಮುಗ್ದ ಹುಡುಗಿ ಪುನಃ ನಿದ್ರೆಗೆ ಜಾರಿದಳು.
ಆಕೆಯನ್ನು ತನ್ನ ತೋಳಲ್ಲಿ ಎತ್ತಿಕೊಂಡು ಬಂದ ನಂದಿನಿ ಕೋಣೆಯಲ್ಲಿನ ತನ್ನ Bed ಮೇಲೆ ಮಲಗಿಸಿ ಮತ್ತೆ ICU ನ ಕಡೆ ಓಡಿದಳು..
ನಂದಿನಿ ICU ತಲುಪುವಷ್ಟರಲ್ಲಿ Doctor ಆಕೆಯ ಪತಿಯೊಂದಿಗೆ ಮಾತಾಡುತ್ತಿದ್ದರು. " Finally ಮಗುವಿನ condition ಈಗ stable ಆಗಿದೆ. ಆದರೆ ಇನ್ನೂ ಅಪಾಯ ಸರಿದಿಲ್ಲ. ನಾವು ನಮ್ಮಕಡೆಯಿಂದ ಸಂಪೂರ್ಣ ಪ್ರಯತ್ನ ಮಾಡುತ್ತೇವೆ. ಆದರೆ ನಾನು ನಿಮಗೆ ಸುಳ್ಳು ಭರವಸೆ ನೀಡಲು ಸಾಧ್ಯವಿಲ್ಲ. ಹಾಗಾಗಿ ನಿಮಗೆ ಒಂದು ವಿಷಯನ್ನು ತಿಳಿಸಲೆ ಬೇಕು. ಮಗು ಈ ಕಷ್ಟದಿಂದ ಹೊರಬಂದರೂ ಸಹ ಮುಂದೊದು ಅಪಾಯ ಕಾದಿದೆ. ತುಂಬಾ ಸಮಯದಿಂದ ಆಕ್ಸಿಜನ್ ಸಿಗದಿರುವುದರಿಂದ ಮಗುವಿನ ದೇಹದಲ್ಲಿ ಕೆಲವು irreversible damage ಆಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಅದೆಲ್ಲವನ್ನೂ ಈಗಲೆ ಹೇಳುವುದು ಕಷ್ಟ Let us wait and watch."

ನರ್ಸ್ ಗೆ ಅಗತ್ಯ ಮಾಹಿತಿಗಳನ್ನು ನೀಡಿ Doctor ಮನೆಗೆ ಹೊರಡುವಾಗ ಮುಂಜಾನೆ ನಾಲ್ಕು- ನಾಲ್ಕೂವರೆ ಆಗಿತ್ತು. ಹೊಗ್ತಾ ಹೊಗ್ತಾ ಅವರು ನಂದಿನಿಯಲ್ಲಿ " ನೀವು ಕೂಡ ಸ್ವಲ್ಪ ಹೊತ್ತು ಮಲಗಿ, ನಿಮಗೂ ವಿಶ್ರಾಂತಿಯ ಅಗತ್ಯ ಇದೆ ಎಂದಾಗ , ನಂದಿನಿ " ಇನ್ನೇನು ನಿದ್ರೆ Doctor , ಇನ್ನೇನಿದ್ದರೂ ಮಗುವನ್ನು ಮನೆಗೆ ಕರೆದುಕೊಂಡು ಹೋದ ನಂತರವೆ ನಾನು ಸಮಾಧಾನವಾಗಿ ಮಲಗುವುದು . ಇದನ್ನು ಕೇಳಿದ Doctor ನಂದಿನಿಗೆ ಧೈರ್ಯ ಹೇಳಿ ಅಲ್ಲಿಂದ ಹೊರಟು ಹೋದರು.
"ನೀವಿಬ್ಬರೂ ಕೋಣೆಗೆ ಹೋಗಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ರಾತ್ರಿಯಿಡಿ ನಿದ್ರೆಯಿಲ್ಲದೆ ಜಾಗರಣೆಯಂತಾಗಿದೆ.ನಾನಿದ್ದಿನಿ ಇಲ್ಲಿ. ಆದಾಗ್ಯೂ ICU ನ ಒಳಗಡೆ ಯಾರೂ ಇರುವಂತಿಲ್ಲ. ನೀವು ಆಗಾಗ ಬಂದು ಮಗುವನ್ನು ನೋಡಿಕೊಂಡು ಹೋಗಬಹುದು." ಎಂದ ICU ನ ನರ್ಸ್ ನ ಮಾತುಗಳನ್ನು ಕೇಳಿ ವಲ್ಲದ ಮನಸ್ಸಿನಿಂದಲೆ ನಂದಿನಿ ಮತ್ತು ಆಕೆಯ ಪತಿ ಕೋಣೆಗೆ ಬಂದು ಕುರ್ಚಿಯ ಮೇಲೆ ಕುಳಿತುಕೊಂಡರು.
ನಂತರದ ಎರಡು - ಮೂರು ದಿನ ಮಗುವಿನ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದವು. Doctor ಹಾಗೂ ನರ್ಸ್ ಗಳಿಂದ ಪ್ರಯತ್ನಗಳ ಪರಾಕಾಷ್ಠೆ ಮುಂದುವರಿದಿತ್ತು. ಸ್ನೇಹಿತರು, ಸಂಬಂಧಿಕರು, ಕುಟುಂಬದ ಎಲ್ಲರೂ ಈ ಕಷ್ಟದ ಪರಿಸ್ಥಿತಿಯಲ್ಲಿ ನಂದಿನಿ ಮತ್ತು ಆಕೆಯ ಪತಿಗೆ ಎಲ್ಲಾ ರೀತಿಯಿಂದಲೂ ಸಹಾಯ ಹಸ್ತ ಚಾಚಿದರು. ಅವರಿಗೆ ಧೈರ್ಯ ತುಂಬಿದರು.

ಕೆಲವರು ತಮಗೆ ತಿಳಿದಂತೆ ಸಲಹೆಯನ್ನು ನೀಡುತ್ತಿದ್ದರು. ಅಂತಹ ಸಲಹೆಗಳ ಬಗ್ಗೆ ನಂದಿನಿಗೆ ಬೇರೆ ಸಮಯದಲ್ಲಿ ಬಹುಶಃ ಅನುಮಾನ ಮೂಡುತ್ತಿತ್ತೊ ಏನೊ, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಆಕೆ ತನ್ನ ಮಗುವಿಗಾಗಿ ಏನನ್ನೂ ಮಾಡಲು ತಯಾರಾಗಿದ್ದಳು. ಮಗುವಿನ ತಲೆದಿಂಬಿನ ಅಡಿ ದೇವರ ಫೋಟೋ ಇಡುವುದರಿಂದ ಹಿಡಿದು ಪ್ರತಿ ಗಂಟೆಗೊಮ್ಮೆ ಮಗುವಿಗೆ ದ್ರಷ್ಠಿತಗೆಯುವವರೆಗೂ ತೋಚಿದ್ದೆಲ್ಲವನ್ನೂ ಮಾಡುತ್ತಿದ್ದಳು. "ಮುಳುಗುವವನಿಗೆ ಹುಲ್ಲು ಕಡ್ಡಿಯೂ ಆಧಾರ ಎನ್ನುವಂತಾಗಿತ್ತು ನಂದಿನಿಯ ಮನಸ್ಸು ".
ಇತ್ತ ಮನಸ್ಸಲ್ಲೆ ನಂದಿನಿ ಅದೆಷ್ಟೋ ಹರಕೆಗಳನ್ನು ಹೊತ್ತುಕೊಂಡಿದ್ದರೆ , ಅತ್ತ ದೇವರ ಮನಸ್ಸಲ್ಲಿ ಬೇರೆಯದೆ ಇತ್ತು. ಏಳನೇ ದಿನದ ಬೆಳಿಗ್ಗೆ ಇದ್ದಕ್ಕಿದ್ದಂತೆ ಮಗುವಿನ ಆರೋಗ್ಯ ಹದಗೆಟ್ಟಿತು. ಡಾಕ್ಟರ್‌ಗಳು ಹತ್ತತ್ರ ಒಂದೂವರೆ ಗಂಟೆಯಿಂದ ICU ನಲ್ಲಿ ಮಗುವನ್ನು ಉಳಿಸುವ ಹೋರಾಟ ನಡೆಸುತ್ತಿದ್ದರು.

ನಂದಿನಿ ICU ನ ಹೊರಗಡೆ ನಿಂತು ಬಾಗಿಲಿನ ಸಣ್ಣ ಗಾಜಿನಿಂದ ಎಲ್ಲವನ್ನೂ ನೋಡುತ್ತಿದ್ದಳು. ಒಂದು ಕೈಯಲ್ಲಿ ದೇವರ ಪೋಟೊ ಗಟ್ಟಿಯಾಗಿ ಹಿಡಿದುಕೊಂಡು ಮ್ರತ್ಯುಂಜಯ ಜಪ ಮಾಡುತ್ತಿದ್ದಳು...
ಸ್ವಲ್ಪ ಹೊತ್ತಲ್ಲೆ ಹೊರಗಡೆ ಬಂದ Doctor ಏನು ಹೇಳಬಾರದೊ ಅದೇ ಶಬ್ದವನ್ನು ಹೇಳಿಬಿಟ್ರು " I am sorry. "

ನಂದಿನಿಯ ಮಗು ಆಕೆಯಿಂದ ಶಾಶ್ವತವಾಗಿ ದೂರವಾಗಿತ್ತು. ಇನ್ನೆಂದು ಅದು ಆಕೆಯ ಬೆರಳನ್ನು ಮುಷ್ಠಿಯಲ್ಲಿ ಹಿಡಿದು ಮಲಗುವುದಿಲ್ಲ. ನಂದಿನಿ ಮಗಳಿಗೆ ಈ ವಿಷಯವನ್ನು ತಿಳಿಸುವಾಗ " ಇಲ್ಲಿನ ಡಾಕ್ಟರ್‌ಗೆ ನಮ್ಮ ಮಗುವನ್ನು ಗುಣಪಡಿಸಲು ಸಾಧ್ಯವಿಲ್ಲ ಅಂತೆ. ಅದಕ್ಕೆ ದೇವರು ನಮ್ಮ ಮಗುವನ್ನು ಆತನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಸಂಪೂರ್ಣ ಗುಣಪಡಿಸಿಕೊಂಡು ನಿನ್ನ ತಮ್ಮನನ್ನು ಬೇಗ ವಾಪಾಸು ಕರೆದುಕೊಂಡು ಬರುತ್ತಾನೆ." ಎಂದು ಮಗಳಿಗೆ ತಿಳಿಸುತ್ತ ನಂದಿನಿ ತನ್ನ ಮನಸ್ಸಿಗೂ ಸಮಾಧಾನ ತಂದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಳು.
ದಿನಗಳು ಕಳೆದವು. ನಂದಿನಿ , ಆಕೆಯ ಪತಿ ಮತ್ತು ಮಗಳು ನಿಧಾನವಾಗಿ ವಸ್ತುಸ್ಥಿತಿಯನ್ನು ಒಪ್ಪಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ನಡೆದಿದ್ದೆಲ್ಲವೂ ದೇವರ ಇಚ್ಚೆ ಎಂದು ಎಲ್ಲರೂ ಒಪ್ಪಿಕೊಂಡರು. ಅಷ್ಟಕ್ಕೂ "ಆಗೊದೆಲ್ಲ ಒಳ್ಳೆಯದಕ್ಕೆ" ಎನ್ನುವ ವಿಚಾರದ ಮೇಲೆ ನಂದಿನಿಗೆ ಯಾವಾಗಲೂ ದ್ರಢ ವಿಶ್ವಾಸವಿತ್ತು. ಆದರೂ,
ನಂದಿನಿಯ ಮನಸ್ಸಿನಲ್ಲಿ ಮಾತ್ರ ಅನೇಕ ಪ್ರಶ್ನೆಗಳಿದ್ದವು.
ಈ ಘಟನೆಯಿಂದ ಏನು ಒಳ್ಳೆಯದು ಆಗುವುದಿದೆ? ಕೇವಲ ಏಳು ದಿನಕ್ಕಾಗಿ ಆ ಪುಟ್ಟ ಜೀವವನ್ನು ನನ್ನ ಜೀವನದಲ್ಲಿ ತರುವುದರ ಹಿಂದೆ ಏನು ಕಾರಣ ಇರಬಹುದು? ನನ್ನ ಮತ್ತು ಆ ಮಗುವಿನ ಋಣಾನುಬಂಧ ಅಷ್ಟೆ ಆಗಿತ್ತಾ? ಹಾಗಿದ್ದರೆ ಆ ಸಣ್ಣ ಜೀವಕ್ಕೆ ಅಷ್ಟೊಂದು ಶಾರೀರಿಕ ಯಾತನೆ ನೀಡಿದ್ದೇಕೆ? ಹೀಗೆ ಉತ್ತರವಿಲ್ಲದ ಸಾವಿರಾರು ಪ್ರಶ್ನೆಗಳನ್ನು ಮನಸ್ಸಿನಲ್ಲೆ ಇಟ್ಟುಕೊಂಡು ನಂದಿನಿ ತನ್ನ ಮುಂದಿನ ಜೀವನವನ್ನು ಸಾಗಿಸತೊಡಗಿದಳು.
ಕಾಲಾಂತರದಲ್ಲಿ ನಂದಿನಿಗೆ ಇನ್ನೊಂದು ಹೆಣ್ಣು ಮಗುವಾಯಿತು. ಆಕೆಗೆ, "ಈ ಬಾರಿ ದೇವರು ತನಗೆ ಅದೇ ಮಗುವನ್ನು ವಾಪಾಸು ಕೊಟ್ಟನೆನೊ ಎಂದು
ಭಾಸವಾಗತೊಡಗಿತ್ತು. ಹಾಗಿದ್ದರೆ ದೇವರು ಮೊದಲು ನನ್ನಿಂದ ಆ ಮಗುವನ್ನು ಕಸಿದುಕೊಂಡಿದ್ದಾದರೂ ಏಕೆ? ಅದೂ ಅಲ್ಲದೆ ಅದಕೆ ಅಷ್ಟೊಂದು ಯಾತನೆ ನೀಡಿದ್ದಾದರೂ ಏಕೆ? ಎನ್ನುವ ಸಹಜ ಪ್ರಶ್ನೆಗಳೂ ಮೂಡಿದವು. ತುಂಬಾ ಯೋಚಿಸಿದರೂ ಆಕೆಗೆ ಸಮಾಧಾನಕರ ಉತ್ತರ ಸಿಗಲಿಲ್ಲ.

ಆಕೆಯ ಸ್ನೇಹಿತೆಯೊಬ್ಬಳು "ನಿನ್ನ ಮತ್ತು ಆ ಮಗುವಿನ ಸಂಬಂಧ ಅಷ್ಟೆ ಇರಬಹುದು" ಎಂದರೆ, ಇನ್ನೊಬ್ಬರು, "ಆ ಮಗುವಿನಿಂದ ಮುಂದೆ ಏನಾದರೂ ಒಳ್ಳೆಯದಾಗಬಹುದು ಅದು ಹೆಣ್ಣು ಮಗುವಿನ ಮೂಲಕವೇ ಈಡೇರಬದುದೆನೊ ಅದಕ್ಕೆ ದೇವರು ಅದೇ ಮಗುವನ್ನು ಹೆಣ್ಣಿನ ರೂಪದಲ್ಲಿ ಕರುಣಿಸಿರಬಹುದು" ಎಂದರು.
ಇದರಲ್ಲಿ ಯಾವುದು ನಿಜ- ಯಾವುದು ಸುಳ್ಳು ಎಂದು ದೇವರಿಗೆ ಗೊತ್ತು. ವಾಸ್ತವವನ್ನು ಅರಿತು ಬದುಕನ್ನು ಮುಂದುವರಿಸುವುದು ಬಿಟ್ಟು ನಂದಿನಿಯ ಬಳಿ ಬೇರೆ
ದಾರಿ ಇರಲಿಲ್ಲ. ಹಾಗಾಗಿ ದೇವರ ಬಳಿ ಏನನ್ನೂ ಪ್ರಶ್ನಿಸದೆ ಪುನಃ ಪತಿ ಹಾಗೂ ತನ್ನಿಬ್ಬರ ಮಕ್ಕಳ ಜೊತೆ ಸಂಸಾರದ ಸಾಗರದೆಡೆಗೆ ಸಾಗಿದಳು.

ನೋಡ ನೋಡುತ್ತಲೆ ಹದಿನೆಂಟು - ಹತ್ತೊಂಬತ್ತು ವರುಷಗಳು ಕಳೆದವು. ಆದರೆ ಪ್ರತಿ ವರ್ಷ ಆಕೆ ತನ್ನ ಮಗುವಿನ ಜನ್ಮದಿನ ಹಾಗೂ ಆ ನಂತರದ ಏಳನೆಯ ದಿನವನ್ನು ಮನಸ್ಸಿನಲ್ಲಿಯೆ ನೆನಪಿಸಿಕೊಳ್ಳುತ್ತಾ, ಮತ್ತೆ ಆ ಕ್ಷಣಗಳಲ್ಲೊಮ್ಮೆ ಬದುಕಿಬರುತ್ತಿದ್ದಳು. ಆಗಾಗ ಆಕೆಗೆ ತನ್ನ ಬೆರಳನ್ನು ಮಗುವಿನ ಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಂತೆ ಅನ್ನಿಸುತ್ತಿತ್ತು. ಆ ಮಗುವಿನ ನಾಜೂಕಿನ ಸ್ಪರ್ಶ ಇನ್ನೂ ಆಕೆಯನ್ನು ಭವ ಬಂಧನದಲ್ಲಿ ಬಿಗಿದಿಟ್ಟಿದೆ.
ಅನೇಕ ಬಾರಿ ನಂದಿನಿಗೆ, ಎಲ್ಲಿರಬಹುದು ನನ್ನ ಮಗು ? ವಾಪಾಸು ನನ್ನ ಬಳಿಯೆ ಬಂದಿರಬಹುದಾ ? ಅಥವಾ ಬೇರೆಕಡೆ ಹೋಗಿರಬಹುದಾ ? ಎಂದು ಅನಿಸಿದ್ದುಂಟು. ಎಲ್ಲಿದ್ದರೂ ಚೆನ್ನಾಗಿರಲಿ ಅಷ್ಟೆ . ಎಂದು ಮನದಲ್ಲೇ ಹಾರೈಸುತ್ತಿದ್ದಳು.

ಒಮ್ಮೊಮ್ಮೆ ಹೇಗಾದರೂ ಮಾಡಿ ಈ ಪ್ರಶ್ನೆಗಳಿಗೆಲ್ಲ ಉತ್ತರವನ್ನು ಕಂಡುಕೊಳ್ಳಲೇ ಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಳು. " ದೇವರೆ ನಿನಗೆ ಸರಿ ಎನ್ನಿಸಿದಾಗ ಈ ಎಲ್ಲಾ ಪ್ರಶ್ನೆಗಳ ಉತ್ತರವನ್ನು ನನ್ನ ಬಳಿ ತಲುಪಿಸು. ಹಾಗೇ ಆ ಸತ್ಯವನ್ನು ಸ್ವೀಕರಿಸುವ ಶಕ್ತಿಯನ್ನು ನನಗೆ ಕರುಣಿಸು" ಎಂದು ಬೇಡಿಕೊಳ್ಳುತ್ತಿದ್ದಳು.
ಇದನ್ನೆಲ್ಲ ಒಮ್ಮೆ ನಂದಿನಿ ತನ್ನ ಆತ್ಮೀಯ ಸ್ನೇಹಿತೆಯೊಬ್ಬಳ ಬಳಿ ಹೇಳಿಕೊಂಡಾಗ ಆಕೆ " ನನ್ನ ಪರಿಚಯದ ಒಬ್ಬರು Tarot card reader ಇದ್ದಾರೆ...She is really good in her field...
ನನ್ನ ಮನಸ್ಸು ಹೇಳುತ್ತಿದೆ ನೀನೊಮ್ಮೆ ಅವರನ್ನು ಭೇಟಿಯಾಗಿ ನಿನ್ನ ಸಮಸ್ಯೆಯನ್ನು ಹೇಳಿಕೊಂಡರೆ.ಉತ್ತರ ಸಿಗಬಹುದು."

ನಂದಿನಿ ಕೊನೆಗೂ ದೇವರು ತನ್ನ ಪ್ರಾರ್ಥನೆಯನ್ನು ಕೇಳಿಸಿಕೊಂಡನು ಎಂದು ಮನದಲ್ಲೇ ಅಂದುಕೊಂಡು, ಕೂಡಲೆ ಆ tarot reader ಅನ್ನು ಬೇಟಿಮಾಡಿದಳು.
ಆರಂಭದ ಕೆಲ ನಿಮಿಷಗಳಲ್ಲೆ ನಂದಿನಿಗೆ ಆ tarot reader ರ ಮೇಲೆ ವಿಶ್ವಾಸ ಮೂಡಿತ್ತು. ಅದರ ಪರಿಣಾಮ ಆಕೆ ತನ್ನ ಮನದ ಮೂಲೆಯಲ್ಲಿ ಬಂಧಿಸಿದ್ದ, ತನ್ನ ಗಂಡನಿಗೂ ಹೇಳದ ಎಲ್ಲಾ ವಿಷಗಳನ್ನೂ ಆ tarot reader ಬಳಿ ಅನಾಯಾಸವಾಗಿ ಹೇಳಿಕೊಳ್ಳತೊಡಗಿದಳು.
ನಂದಿನಿಯ ಹೊಸ ಗೆಳತಿ ಇದೆಲ್ಲವನ್ನೂ ಶಾಂತವಾಗಿ
ಕೇಳಿಸಿಕೊಂಡು ಕೆಲ ಸೆಕೆಂಡುಗಳ ಕಾಲ ಕಣ್ಣು ಮುಚ್ಚಿ
ಧ್ಯಾನ ಮಾಡುತ್ತಾ ನಂದಿನಿಗಾಗಿ tarot reading ಶುರುಮಾಡಿದಳು.

ಮುಂದಿನ ಕೆಲ ತಾಸುಗಳ ಕಾಲ ಆಕೆ ಹೇಳುತ್ತಿರುವುದೆಲ್ಲವನ್ನೂ ನಂದಿನಿ ಸೂಕ್ಮವಾಗಿ ಕೇಳಿಸಿಕೊಳ್ಳುತ್ತಿದ್ದಳು. ಆಕೆಯ ಬಾಯಿಯಿಂದ ಬಂದ ಪ್ರತಿ ಶಬ್ದವೂ ನಂದಿನಿಗೆ ಸತ್ಯ ಎನಿಸತೊಡಗಿತ್ತು. ಕಿವಿಯಾಲೆಗಳಿಗೆ ಕಂಪಿಸಿದ ಆ ಶಬ್ದಗಳು ನಿಧಾನವಾಗಿ ಮನದಲ್ಲಿನ ವಿಚಾರಗಳನ್ನು ಶಾಂತವಾಗಿಸತೊಡಗಿತ್ತು. ದಿಕ್ಕೆಟ್ಟು ದಿಕ್ಕಾಪಾಲಾಗಿ ಓಡುತ್ತಿರುವ ವ್ಯಕ್ತಿಗೆ ಒಂದು ಸರಿಯಾದ ದಿಕ್ಕು ತೋಚಿದರೆ ಉಂಟಗುವಂತಹ ಸಮಾಧಾನ ನಂದಿನಿಗೆ ಈಗ ಸಿಗುತ್ತಿತ್ತು.
Tarot reading ನಂತಹ ನಂಬಿಕೆಗಳಿಂದ ದೂರ
ಉಳಿದಿದ್ದ ನಂದಿನಿಗೆ ಈಗ ಅದನ್ನು ಪರಿಪೂರ್ಣವಾಗಿ ಒಪ್ಪಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿತ್ತು. ಅಷ್ಟಕ್ಕೂ ಇಲ್ಲಿ ಪ್ರಶ್ನೆ ಇರೋದು ವಿಶ್ವಾಸ ಹಾಗೂ ನಂಬಿಕೆಯದು. ಯಾರಿಗೆ tarot ಅಥವಾ ಅದರಂತೆ ಇತರೆ ಭವಿಷ್ಯವಾಣಿಯ ಬಗ್ಗೆ ನಂಬಿಕೆ ಇಲ್ಲವೂ ಅವರು ಇದೆಲ್ಲವನ್ನು ಒಪ್ಪುವುದಿಲ್ಲ ,ಹಾಗಂತ ಅದನ್ನು ಅನರ್ಥ ಎಂದು ಭಾವಿಸುವುದು ಸರಿಯಲ್ಲ. ಅಷ್ಟಕ್ಕೂ ನಂಬಿದರೆ ದೇವರು ಇಲ್ಲ ಎಂದರೆ ಬರೀ ಕಲ್ಲು ಎನ್ನುವುದನ್ನು ನಂದಿನಿ ಚೆನ್ನಾಗೆ ಅರಿತಿದ್ದಳು.

ಆದಿನ ನಂದಿನಿಗೆ ಆ tarot reader ಹೇಳುವುದೆಲ್ಲವೂ ಸತ್ಯವೆಂದು ಅನ್ನಿಸತೊಡಗಿತ್ತು. Tarot reader ನಂದಿನಿಯ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲು ಶುರು ಮಾಡಿದಳು. " ನಿನ್ನ ಮಗುವಿಗೆ ಮುಕ್ತಿ ಸಿಕ್ಕಿದೆ. In fact ಆ ಆತ್ಮಕ್ಕೆ ಮುಕ್ತಿ ಬೇಕಿತ್ತು ಹಾಗಾಗಿ ಅದು ನಿನ್ನ ಹೊಟ್ಟೆಯಲ್ಲಿ ಜನ್ಮ ಪಡೆಯಲು ಬಯಸಿತ್ತು" ಇದನ್ನು ಕೇಳಿ ನಂದಿನಿ ಧಿಗ್ಬ್ರಾಂತಳಾಗಿ ಮರು ಪ್ರಶ್ನೆ ಹಾಕಿದಳು " "ನನ್ನ ಹೊಟ್ಟೆಯಲ್ಲಿ ಜನ್ಮ ಪಡೆಯಲು ಬಯಸಿತ್ತು" ಎಂದರೆ ? ಅದಕ್ಕೆ ಆ tarot reader "The soul chooses the womb." ಎನ್ನುವುದು ನಮ್ಮ ನಂಬಿಕೆ ಎಂದು ಉತ್ತರಿಸಿದಳು.
ಹಾಗಾದರೆ ಆತ ನನ್ನನ್ನೆ ಏಕೆ ಆರಿಸಿಕೊಂಡ? ನಂದಿನಿಯ ಮನಸ್ಸಿನಲ್ಲಿ ಮನೆಮಾಡಿದ್ದ ಗೊಂದಲಗಳು ಈ ಪ್ರಶ್ನೆಯಲ್ಲಿ ಎದ್ದು ಕಾಣುತ್ತಿದ್ದವು.
"He chose you because of the purity of your womb" ಇಲ್ಲಿ purity ಅಂದರೆ ಶರೀರದ ಆಂತರಿಕ ಸ್ವಚ್ಚತೆಯಲ್ಲ, ಇದು ಮನಸ್ಸು, ಆತ್ಮ ,ಹಾಗೂ ಆಧ್ಯಾತ್ಮಿಕತೆಯ ನಂಬಿಕೆಗಳ ಮೇಲಿನ purity. ನಿನ್ನಿಂದಾಗಿ ಒಂದು ಆತ್ಮಕ್ಕೆ ಮುಕ್ತಿ ಸಿಕ್ಕಿದೆ. ಹಾಗಾಗಿ ನೀನು ನಿಶ್ಚಿಂತೆಯಿಂದ ಇರು ಎಂದು ನಂದಿನಿಯ ಹೊಸ ಗೆಳತಿ ಉತ್ತರಿಸಿದಳು.

ನಂದಿನಿಯ ಮನಸ್ಸಲ್ಲಿ ಉಳಿದಿದ್ದ ಇನ್ನೂ ಒಂದು ಪ್ರಶ್ನೆಯನ್ನು ತಡಮಾಡದೆ ಕೇಳಿಯೆ ಬಿಟ್ಟಳು.
ಹಾಗಾದರೆ ಆ ಪುಟ್ಟಾ ಶರೀರಕ್ಕೆ ಅಷ್ಟೊಂದು ಯಾತನೆ ನೀಡಿದ್ದೇಕೆ? ಇದನ್ನು ಕೇಳುತ್ತಲೆ ವರ್ಷಗಳ ಹಿಂದಿನ ಆ ದಿನದ ICU ನ ಎಲ್ಲಾ ಚಿತ್ರಗಳು ಒಮ್ಮೆ ನಂದಿನಿಯ ಕಣ್ಣಮುಂದೆ ಹಾದು ಹೋದವು.
"ಇದೆಲ್ಲ ಅವನ ಹಿಂದಿನ ಜನ್ಮದ ಪಾಪಕರ್ಮಗಳು. ಮುಕ್ತಿಗಾಗಿ ಅವೆಲ್ಲವೂ clear ಆಗಬೇಕಾದ ಅವಶ್ಯಕತೆ ಇತ್ತು. ಆದರೆ ಈಗ ಆತ ಇದೆಲ್ಲದರಿಂದ ದೂರ ಹೋಗಿದ್ದಾನೆ. ಆತನ ಈ ಪಯಣದಲ್ಲಿ ನಿನ್ನ ಪಾತ್ರ ಬಹು ಮುಖ್ಯವಾಗಿತ್ತು" ಎಂದು ಉತ್ತರಿಸುತ್ತ tarot reader ತನ್ನ ಮಾತನ್ನು ನಿಲ್ಲಿಸಿದಳು.

ನಂದಿನಿಗೆ ತನ್ನ ಎಲ್ಲಾ ಪ್ರಶ್ನೆಗಳ ಉತ್ತರ ಸಿಕ್ಕಿತ್ತು. ಇಷ್ಟು ವರ್ಷದಿಂದ ಬೆಂಬಿಡದೆ ಕಾಡಿದ ಎಲ್ಲಾ ಪ್ರಶ್ನೆಗಳು ಈಗ ಇದ್ದಕ್ಕಿದ್ದಂತೆ ಇಲ್ಲವಾಗಿದೆ. 'ಎಲ್ಲಿರಬಹುದು ನನ್ನ ಮಗು' ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಎಲ್ಲದಕ್ಕೂ ಹೆಚ್ಚಾಗಿ ಇಷ್ಟೊಂದು ವರ್ಷದಿಂದ ಆಕೆ ಆಲೋಚಿಸಿದ್ದಕ್ಕಿಂತಲೂ ಎತ್ತರದ ಸ್ಥಾನವನ್ನು ಆಕೆಯ ಮಗು ತಲುಪಿದ್ದು, ಅದಕ್ಕಾಗಿ ಸ್ವತಃ ತಾನೇ ಕಾರಣವಾಗಿದ್ದಕ್ಕೆ ಆಕೆಗೆ ಸಮಾಧಾನವೂ ಇತ್ತು.
ನಂದಿನಿಗೆ ಈಗ ತನ್ನ ಹಾಗೂ ಮಗುವಿನ ಮುಷ್ಠಿಯ ಬಂಧನ ಒಂದು ಸಾಂಕೇತಿಕ ಬಂಧನದಂತೆ ಕಾಣುತ್ತಿತ್ತು.
ಅಂದರೆ, ರಸ್ತೆ ದಾಟುವಾಗ ಒಬ್ಬ ಹುಡುಗ ತನ್ನ ತಾಯಿಯ ಬೆರಳನ್ನು ಹಿಡಿದು ನೆಡಯುತ್ತಾನಲ್ಲ ಹಾಗೆ.
ನಂತರ ಬೇರೆಡೆಗೆ ಹೋಗಬೇಕಾದ ಸಂದರ್ಭದಲ್ಲಿ ತನ್ನ ತಾಯಿಯ ಬೆರಳನ್ನು ಬಿಟ್ಟು ನಡೆದು ಬಿಟ್ಟಿತ್ತು ನಂದಿನಿಯ ಮಗು.
ಆದರೆ ಆಶ್ಚರ್ಯವೆಂದರೆ ಈ ಭಾರಿ ನಂದಿನಿ ಇವೆಲ್ಲವನ್ನೂ ನೆನೆದು ದುಃಖವಾಗಿರಲಿಲ್ಲ, ಬದಲಾಗಿ ಆಕೆಗೆ ತನ್ನ ಮಗುವಿಗೆ ಇನ್ನೆಂದೂ ಕಷ್ಟ, ನೋವು, ಯಾತನೆಯನ್ನು ಅನುಭವಿಸಬೇಕಾದ ಅಗತ್ಯವಿಲ್ಲ, ತನ್ನ ಮಗು ಇನ್ನು ನಿತ್ಯ ನಿರಂತರವಾಗಿ ಆನಂದದಿಂದ ಇರಬಹುದು ಎನ್ನುವ ವಿಚಾರದಿಂದ ಆಕೆ ಧನ್ಯಳಾಗಿದ್ದಳು.
ಇಷ್ಟು ವರ್ಷ,ತನ್ನ ಕಿರಿದಾದ ಗುಲಾಬಿ ಬೆರಳನ್ನು ಇಟ್ಟು ಮುಷ್ಠಿಯ ಬಂಧನದಲ್ಲಿ ಸಿಲುಕಿದ್ದ ನಂದಿನಿಯ ಮಗುವಿಗೆ ಮುಕ್ತಿ ಸಿಕ್ಕಿತ್ತು. ಹಾಗೇ, ನೋವು, ಯಾತನೆ, ಗೊಂದಲಗಳಲ್ಲಿ ನೊಂದು ,ಬೆಂದಿದ್ದ ನಂದಿನಿಯ ಮನಸ್ಸೂ ಈಗ ನಿರಾಳವಾಗಿದೆ.

- ನಾಗೇಂದ್ರ ಉಪ್ಪುಂದ.
---------------------************---------------------
0 Comments