ಏಕಿಷ್ಟು ಚೆಂದವಿರುವೆ ಹುಡುಗಿ..
ಹುಣ್ಣಿಮೆಯ ಬೆಳಕಂತೆ..!
ಇಳಿ ಸಂಜೆಯ ಆಗಸದಂತೆ..!
ತಿಳಿನೀರ ತೊರೆಯಂತೆ..!
ಋಷಿ ಮುನಿಗಳ ತಪಸ್ಸನ್ನು ಕೆಡಿಸಲು
ಧರೆಗೆ ಅಪ್ಸರೆಯರು ಇಳಿದು ಬರುವ
ಕಥೆಯ ಕೇಳಿದ್ದೆ..
ನಿನ್ನ ನೋಡಿದ ಮೇಲೆ ಅದು
ಸುಳ್ಳು ಎನ್ನಲು ಸಾದ್ಯವೇ...?
ನನ್ನದು ಬರೀ ಹೊಗಳಿಕೆ ಎನಿಸಿದರೆ
ನಿನ್ನ ಮನೆಯ ಕನ್ನಡಿಯನೊಮ್ಮೆ ಕೇಳಿ ನೋಡು..
ನಿನ್ನಂದದ ಅರಿವು ನನಗಿಂತ ಅದಕ್ಕೆ ಹೆಚ್ಚಿದೆ‌..!

..... ನಾಗೇಂದ್ರ ಉಪ್ಪುಂದ